Post office jobs : ಪೋಸ್ಟ್ ಆಫೀಸ್ ಅಲ್ಲಿ ಖಾಲಿ ಇರುವ 44,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

Post office jobs : ಪೋಸ್ಟ್ ಆಫೀಸ್ ಅಲ್ಲಿ ಖಾಲಿ ಇರುವ 44,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

 

Post office jobs : ಸ್ನೇಹಿತರೆ ನಮ್ಮ ಮಾಧ್ಯಮಕ್ಕೆ ತಮಗೆ ಸ್ವಾಗತ. ಈ ದಿನ ನಮ್ಮ ಲೇಖನದಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 44,000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ, ಇಲಾಖೆಯಿಂದ ಹೋರಾಡಿಸಲಾದ ಅಧಿಸೂಚನೆಯ ಕುರಿತು ಇಲ್ಲಿ ನಿಮಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಆದ ಕಾರಣ ಹುದ್ದೆಗಳಿಗಾಗಿ ಹುಡುಕುತ್ತಿರುವವರಿಗೆ ಇದೊಂದು ಸುವರ್ಣಾವಕಾಶ ಆಗಿದ್ದು, ಇಂತವರು ಈ ಲೇಖನವನ್ನು ಕೊನೆಯ ತನಕ ಓದಿ. ಆಸಕ್ತಿ ಮತ್ತು ಹುದ್ದೆಗೆ ಅಧಿಸೂಚನೆಯಲ್ಲಿ ನಿಗದಿಪಡಿಸಿದ ಅರ್ಹತೆಗಳು ಇದ್ದರೆ ತಪ್ಪದೆ ಕೊನೆಯ ದಿನಾಂಕದ ಒಳಗೆ ಅರ್ಜಿ ಹಾಕಿ.

ಹೌದು ಅಭ್ಯರ್ಥಿಗಳೇ ಪೋಸ್ಟ್ ಆಫೀಸ್ ಅಲ್ಲಿ ಖಾಲಿ ಇರುವ ಸುಮಾರು 44,000 ಕ್ಕು ಹೆಚ್ಚು ಹುದ್ದೆಗಳ ಭರ್ತಿಗೆ ಜನೆವರಿ 29 ನೆಯ ತಾರೀಕು ಇಲಾಖೆಯು ಅಧಿಸೂಚನೆಯನ್ನು ಹೊರಡಿಸಲಿದೆ. ಈ ಹುದ್ದೆಗಳು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದು, ಆಸಕ್ತಿ ಇರುವವರು ಅರ್ಜಿ ಹಾಕಬಹುದು. ಅರ್ಜಿ ಹಾಕಲು ಸಂಬಂಧ ಪಟ್ಟ ಹುದ್ದೆಗಳು ವಿವರ, ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆ, ಹುದ್ದೆಯ ಆಯ್ಕೆ ವಿಧಾನ ಮತ್ತು ಹುದ್ದೆಗೆ ಹೇಗೆ ಅರ್ಜಿ ಹಾಕಬೇಕು ಅನ್ನುವ ಪ್ರತಿಯೊಂದು ಮಾಹಿತಿಯನ್ನು ತಿಳಿಯಲು ಇಲ್ಲಿ ಓದಿ.

 

ಪೊಸ್ಟ್ ಆಫೀಸ್ ಹುದ್ದೆಗಳು (Post office jobs) :

ಅಭ್ಯರ್ಥಿಗಳೇ ಪೋಸ್ಟ್ ಆಫೀಸ್ ಅಂದರೆ ಭಾರತೀಯ ಅಂಚೆ ಇಲಾಖೆಯ ಮೂಲಕ ಹೊರಡಿಸಲಿರುವ ಅಧಿಸೂಚನೆಯ ಬೃಹತ್ ಹುದ್ದೆಗಳ ನೇಮಕಾತಿ ಆಗಿದೆ. ಏಕೆಂದರೆ ದೇಶದಾದ್ಯಂತ  ಸುಮಾರು 44,000 ಕೂ ಹೆಚ್ಚಿನ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಯ ನೇಮಕಾತಿ ಮಾಡಲು ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

 

ಗೃಹ ಲಕ್ಷ್ಮೀ ಯೋಜನೆಯ 16 ನೆಯ ಕಂತಿನ ಹಣ ಜಮ ಆಗುವುದರ ಬಗ್ಗೆ, ಹೊಸ ಮಾಹಿತಿ ಬಿಡುಗಡೆ. ಸಂಪೂರ್ಣ ಮಾಹಿತಿಗೆ ಇಲ್ಲಿ ಒತ್ತಿ.

 

ಹುದ್ದೆಗೆ ಶೈಕ್ಷಣಿಕ ಅರ್ಹತೆಗಳು :

ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಹಾಕಲು ಕೇವಲ 10 ನೆಯ ತರಗತಿ ಪಾಸ್ ಆದರೆ ಸಾಕು ಹುದ್ದೆಗೆ ಅರ್ಜಿ ಹಾಕಬಹುದು. ಹುದ್ದೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳಲ್ಲಿ ಅವರ 10 ನೆಯ ತರಗತಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ ಈ ಹುದ್ದೆಗೆ 18 ರಿಂದ 40 ವರ್ಷದ ವಯಸ್ಸಿನವರು ಅರ್ಜಿ ಹಾಕಲು ಅವಕಾಶವಿದೆ.

 

ಅರ್ಜಿ ಶುಲ್ಕ :

  • SC/ST, ಮಹಿಳಾ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
  • ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹100 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕು.

 

ಅರ್ಜಿ ಸಲ್ಲಿಸುವುದು ಹೇಗೆ ?

ಅಭ್ಯರ್ಥಿಗಳೇ ಜನೆವರಿ 29 ನೆಯ ತಾರೀಕು ಈ ಪೊಸ್ಟ್ ಆಫೀಸ್ ಹುದ್ದೆಗಳಿಗೆ ಸಂಭಂಧಿಸಿದ ಹಾಗೆ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಅಧಿಸೂಚನೆಯಲ್ಲಿ ಪ್ರತಿಯೊಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ನಿಮಗೆ ಈ ಹುದ್ದೆಗೆ ಬೇಕಾದ ಅರ್ಹತೆ ಮತ್ತು ಹುದ್ದೆಯಲ್ಲಿ ಆಸಕ್ತಿ ಇದ್ದರೆ ತಪ್ಪದೆ ಹುದ್ದೆಗೆ ಅರ್ಜಿ ಹಾಕಿ. ಹುದ್ದೆಗೆ ಅರ್ಜಿ ಹಾಕಲು ಬೇಕಾದ ಲಿಂಕ್ ಕೆಳಗೆ ನೀಡಲಾಗಿದೆ.

 

ಅರ್ಜಿ ಹಾಕಲು ಇಲ್ಲಿ ಒತ್ತಿ.

 

ಸ್ನೇಹಿತರೆ ನಿಮ್ಮ ಅರ್ಜಿಯನ್ನು ಭರ್ತಿ ಮಾಡಿದ ನಂತರ, ನಿಮಗೆ ಅನ್ವಯಿಸುವ ಅರ್ಜಿ ಶುಲ್ಕವನ್ನು ತಪ್ಪದೆ ಪಾವತಿಸಿ. ಇಲ್ಲವಾದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳು.

 

WhatsApp group join 

 

Leave a Comment