New BPL Ration Card : ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ! ಇಲ್ಲಿದೆ ಪಡಿತರ ಚೀಟಿ ತಿದ್ದುಪಡಿಯ ಕೊನೆಯ ದಿನಾಂಕ!
New BPL Ration Card : ನಮಸ್ಕಾರ ಕರ್ನಾಟಕದ ಜನತೆಗೆ. ಈ ಲೇಖನದ ಮುಖಾಂತರ ಜನತೆಗೆ ತಿಳಿಸುವ ಮಾಹಿತಿ ಏನೆಂದರೆ, ಕರ್ನಾಟಕದ ಅಹಾರ ಇಲಾಖೆಯು ರೇಷನ್ ಕಾರ್ಡ್ (ಪಡಿತರ ಚೀಟಿ) ತಿದ್ದುಪಡಿಗೆ ಅವಕಾಶ ನೀಡಿದೆ. ಅದರ ಮಾಹಿತಿ ಇಲ್ಲಿ ನೀಡಲಾಗಿದೆ. ಆದ ಕಾರಣ ಪಡಿತರ ಚೀಟಿ ತಿದ್ದುಪಡಿ ಮಾಡಲು ಮತ್ತು ಹೊಸ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯುವವರು ತಪ್ಪದೆ ಕೊನೆಯ ತನಕ ಈ ಲೇಖನ ಓದಿ ಪ್ರಮುಖ ಮಾಹಿತಿ ತಿಳಿಯಿರಿ.
ರೇಷನ್ ಕಾರ್ಡ್ ತಿದ್ದುಪಡಿ (New BPL Ration Card) :
ಹೌದು ಸ್ನೇಹಿತರೆ ಕರ್ನಾಟಕದ ಆಹಾರ ಇಲಾಖೆಯು ರೇಷನ್ ಕಾರ್ಡ್ ಗಳ ತಿದ್ದುಪಡಿ ಅಂದರೆ ಹೆಸರು ಬದಲಾವಣೆ, ಫೋನ್ ನಂಬರ್ ಬದಲಾವಣೆ, ಕುಟುಂಬದ ಮುಖ್ಯಸ್ಥರ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ ಮತ್ತು ಸದಸ್ಯರ ಡಿಲೀಟ್ ಮಾಡಲು ಅವಕ್ಷ ನೀಡಿದೆ. ಆದ್ದರಿಂದ ಹೊಸದಾಗಿ ಮದುವೆ ಆದವರು ಕೂಡ ಸದಸ್ಯರ ಸೇರ್ಪಡೆ ಮಾಡಬಹುದಾಗಿದೆ. ಅದಕ್ಕೆ ಏನೆಲ್ಲಾ ಬೇಕು ಮತ್ತು ಎಲ್ಲಿ ತಿದ್ದುಪಡಿ ಮಾಡಿಸಬೇಕು ಇಲ್ಲಿದೆ ಮಾಹಿತಿ.
ಹೊಸ ರೇಷನ್ ಕಾರ್ಡ್ (ಪಡಿತರ ಚೀಟಿ) ಅರ್ಜಿ ಹಾಕಲು ಇನ್ನು ಸರ್ಕಾರವು ಅವಕಾಶ ನೀಡಿಲ್ಲ, ಕೇವಲ ತಿದ್ದುಪಡಿಗೆ ಮಾತ್ರ ಅವಕಾಶ ನೀಡಿದೆ. ತಿದ್ದುಪಡಿ ಮಾಡಲು 31/01/2025 ರ ತನಕ ಕೊನೆಯ ದಿನಾಂಕ ನೀಡಲಾಗಿದ್ದು, ಇದು ಮುಗಿದ ನಂತರ ಹೊಸ ರೇಷನ್ ಕಾರ್ಡ್ ಗಳನ್ನು ನೀಡಲು ಅರ್ಜಿ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ ಅದಕ್ಕೆ ಕಾದು ನೋಡಬೇಕಿದೆ.
- ರೇಷನ್ ಕಾರ್ಡ್ ತಿದ್ದುಪಡಿ ಕೊನೆಯ ದಿನಾಂಕ – 31/01/2025
- ಬೆಳಗ್ಗೆ 10 ಗಂಟೆಯಿಂದ 5 ಗಂಟೆಯ ತನಕ
ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳು?
ಸ್ನೇಹಿತರೆ ಪಡಿತರ ಚೀಟಿ ತಿದ್ದುಪಡಿ ಮಾಡಲು ನೀವು ತಿದ್ದುಪಡಿ ಮಾಡುತ್ತಿರುವುದಕ್ಕೆ ಸಂಬಂಧಪಟ್ಟ ದಾಖಲೆ ನೀಡಬೇಕಾಗುತ್ತದೆ.
- 5 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಸೇರ್ಪಡೆ ಮಾಡಲು ಹುಟ್ಟಿದ ದಿನಾಂಕ ಬೇಕಾಗುತ್ತದೆ.
- ಬೇರೆ ಇನ್ನಿತರ ಸದಸ್ಯರನ್ನು ಸೇರಿಸಲು ಅವರ ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ.
- ಮದುವೆಯಾದವರ ಸೇರಿಸಲು ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ.
- ಫೋನ್ ನಂಬರ್ ಸಹ ಬದಲಾವಣೆ ಮಾಡಬಹುದು.
- ಹೆಸರು ಬದಲಾವಣೆ ಮಾಡಲು ಆಧಾರ್ ಕಾರ್ಡ್ ಬೇಕಾಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ?
ಸ್ನೇಹಿತರೆ ನೀವು ಮೇಲೆ ತಿಳಿಸಿದಂತಹ ಯಾವುದೇ ರೀತಿಯ ತಿದ್ದುಪಡಿ ಮಾಡಲು ಅದಕ್ಕೆ ಸಂಬಂಧಿಸಿದ ದಾಖಲೆಯೊಂದಿಗೆ ನಿಮ್ಮ ಹತ್ತಿರದಲ್ಲಿನ ಯಾವುದಾದರೂ ಗ್ರಾಮ ಒನ್, ಕರ್ನಾಟಕ ಒನ್, CSC ಸೆಂಟರ್ ಗಳಿಗೆ ಭೇಟಿ ನೀಡಿ ತಿದ್ದುಪಡಿ ಮತ್ತು ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಜನೆವರಿ 31 ಕೊನೆಯ ದಿನಕವಾಗಿದೆ. ಈ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇನೆ. ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು ಮತ್ತೆ ಇದೆ ತರಹದ ಮಾಹಿತಿಗಾಗಿ ವಾಟ್ಸಾಪ್ ಗ್ರೂಪ್ ಗೆ ಸೇರಿಕೊಳ್ಳಿ.