Lost adhar card download : ಮೊಬೈಲ್ ನಂಬರ್ ಲಿಂಕ್ ಇಲ್ಲದೆ, ಕಳೆದು ಹೋದ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ!

Lost adhar card download : ಮೊಬೈಲ್ ನಂಬರ್ ಲಿಂಕ್ ಇಲ್ಲದೆ, ಕಳೆದು ಹೋದ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ!

 

Lost adhar card download : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಒಂದು ಲೇಖನದ ಮಾಹಿತಿಗೆ ಸ್ವಾಗತ. ಈ ಲೇಖನದಲ್ಲಿ ಮೊಬೈಲ್ ನಂಬರ್ ಲಿಂಕ್ ಇಲ್ಲ, ಅಂದರು ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಹೇಗೆ ಡೌನ್ಲೋಡ್ ಮಾಡುವುದು ಅನ್ನುವ ಮಾಹಿತಿ ತಿಳಿಸುತ್ತಿದ್ದೇವೆ. ಆದ್ದರಿಂದ ಈ ಮಾಹಿತಿ ಪೂರ್ಣವಾಗಿ ಓದಿ ನಿಮಗೆ ಇದು ಮುಂದೆ ಉಪಯೋಗವಾಗುತ್ತದೆ ಅಥವಾ ನಿಮ್ಮ ಪರಿಚಯದವರಿಗೆ ಮಾಹಿತಿ ಅವಶ್ಯಕ ಇದ್ದರೆ ತಿಳಿಸಿ.

ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ನೀವು ದೇಶದಲ್ಲಿನ ಯಾವುದೇ ರಾಜ್ಯದವರು ಮತ್ತು ಯಾವುದೇ ಜಿಲ್ಲೆ ಹಾಗೂ ಊರಿನವರಾದರು ಕೂಡ ನೀವು ನಿಮ್ಮ ಕಳೆದು ಹೋದ ಆಧಾರ್ ಕಾರ್ಡ್ ಅನ್ನು ನಿಮ್ಮ ಮೋಬೈಲ್ ಮೂಲಕ ಆನ್ಲೈನ್ ಅಲ್ಲಿಯೇ ಡೌನ್ಲೋಡ್ ಮಾಡಬಹುದು ಅದು ಹೇಗೆ ಎಂಬ ಮಾಹಿತಿ ಕೆಳಗೆ ತಿಳಿದುಕೊಳ್ಳಿ.

 

ಆಧಾರ್ ಕಾರ್ಡ್ (Lost adhar card download) :

ಸ್ನೇಹಿತರೆ ನಮ್ಮ ದೇಶದಲ್ಲಿ ಈಗಿನ ದಿನಮಾನಗಳಲ್ಲಿ ಆಧಾರ್ ಕಾರ್ಡ್ ಕೇವಲ ಒಂದು ಗುರುತಿನ ಚೀಟಿ ಆಗಿರದೆ, ದೇಶದಲ್ಲಿನ ಹಲವು ಯೋಜನೆಗಳ ಮತ್ತು ಇನ್ನಿತರೆ ಪ್ರಮುಖ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿ ಅಂದರೆ ಯಾವುದೇ ಜಾತಿ, ಲಿಂಗ ಮತ್ತು ವಯಸ್ಸಿನ ತಾರತಮ್ಯ ಇಲ್ಲದೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಪಡೆಯಬಹುದಾಗಿದೆ. ಈ ಆಧಾರ್ ಕಾರ್ಡ್ ಅನ್ನು ಒಬ್ಬ ವ್ಯಕ್ತಿ ಕೇವಲ ಒಂದು ಬಾರಿ ಮಾತ್ರ ಮಾಡಿಸಿದರೆ ಸಾಕು ಜೀವನ ಪೂರ್ತಿ ಬಳಸಬಹುದು.

ಹೌದು ಗೆಳೆಯರೇ ನಿಮ್ಮ ಕಳೆದು ಹೋದ, ಯಾವುದೇ ಮೊಬೈಲ್ ನಂಬರ್ ಮತ್ತು ಜೆರಾಕ್ ಕಾಪಿ ಇಲ್ಲದೆ ಇದ್ದರೂ ಕೇವಲ ಆಧಾರ್ ನಂಬರ್ ಅಥವಾ ವರ್ಚುವಲ್ ನಂಬರ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಅದರ ಪ್ರತಿಯೊಂದು ಮಾಹಿತಿಯನ್ನು ಹಂತ ಹಂತವಾಗಿ ಇಲ್ಲಿ ನೀಡಲಾಗಿದೆ.

 

ಕೇವಲ ₹10,000 ಕಟ್ಟುವ ಮೂಲಕ hero HF Deluxe bike ಅನ್ನು ಖರೀದಿ ಮಾಡಬಹುದು. ಅದು ಹೇಗೆ ಮತ್ತು ಬೈಕ್ ವಿಶೇಷತೆಗಳೇನು ಎಂಬ ಮಾಹಿತಿ ತಿಳಿಯಲು ಇಲ್ಲಿ ಒತ್ತಿ!

 

ಕಳೆದ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

ಸ್ನೇಹಿತರೆ ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ , ನೀವು ಯಾವುದೇ ರೀತಿ ಚಿಂತಿಸಬೇಕಿಲ್ಲ ಯಾಕೆಂದರೆ ನೀವು ಕೇವಲ ₹50 ರೂಪಾಯಿಯನ್ನು ನೀಡುವ ಮೂಲಕ ನಿಮ್ಮ ಮನೆಗೆ ಆಧಾರ್ ಕಾರ್ಡ್ ಅನ್ನು ತರೆಸಿಕೊಳ್ಳಬಹುದು. ಈ ಕೆಳಗೆ ನೀಡಿದ ಹಂತಗಳನ್ನು ಅನುಸರಿಸಿ ಆಧಾರ್ pvc ಕಾರ್ಡ್ ಗೆ ಅರ್ಜಿ ಹಾಕಬಹುದು. ಇದು ಕೇವಲ ಒಂದು ವಾರದಲ್ಲಿ ನಿಮ್ಮ ಮನೆಗೆ ತಲುಪುತ್ತದೆ.

ಹಂತ 1 : ಮೊದಲು ಮೇಲೆ ನೀಡಿದ ಆಧಾರ್ ನ ಅಧಿಕೃತ ವೆಬ್ಸೈಟ್ UIDAI ಗೆ ಭೇಟಿ ನೀಡಬೇಕು.

ಹಂತ 2 : ನಂತರ ಅಲ್ಲಿ Get aadhaar ಆಯ್ಕೆಯಲ್ಲಿರುವ, ಚಿತ್ರದಲ್ಲಿ ತೋರಿಸಿರುವ order aadhaar pvc card ಅನ್ನುವ ಆಯ್ಕೆಯ ಮೇಲೆ ಒತ್ತಿ.

Lost adhar card download

ಹಂತ 3 : ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ಎನ್ ರೊಲಮೆಂಟ್ ಐಡಿ ಹಾಕಿ, ಕೊಟ್ಟಿರುವ captcha ಎಂಟರ್ ಮಾಡಿ.

ಹಂತ 4 : ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಇಲ್ಲ ಅಂದರೆ ಚಿತ್ರದಲ್ಲಿ ತೋರಿಸಿದ ಹಾಗೆ my mobile number is not registered ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಬಳಿ ಇರುವ ಯಾವುದಾದರೂ ಮೊಬೈಲ್ ನಂಬರ್ ಹಾಕಿ, send OTP ಮೇಲೆ ಒತ್ತಿ.

Lost adhar card download

ಹಂತ 5 : ನಂತರ ಕೊಟ್ಟಿರುವ security code ಎಂಟರ್ ಮಾಡಿ make payment ಮೇಲೆ ಒತ್ತಿ, ಪೋನ್ ಪೇ, UPI ಅಥವಾ ಯಾವುದರ ಮೂಲಕವಾದರೂ ಪೇಮೆಂಟ್ ಮಾಡಿ. ಇದರ ಶುಲ್ಕ 50 ರೂಪಾಯಿ ಇರುತ್ತದೆ. ಪೇಮೆಂಟ್ ಆದ ನಂತರ srs ನಂಬರ್ ಅನ್ನು ಸೇವ್ ಮಾಡಿಕೊಳ್ಳಿ. ಇದರ ಮೂಲಕ ಅರ್ಜಿಯ ಸ್ಥಿತಿ ತಿಳಿಯಬಹುದು. ಇದಾದ ಒಂದು ವಾರದ ಒಳಗೆ ನಿಮ್ಮ ಮನೆಗೆ ಆಧಾರ್ pvc card ಕಳುಹಿಸುತ್ತಾರೆ.

 

ಸ್ನೇಹಿತರೆ ಈ ರೀತಿಯಾಗಿ ಕೇವಲ ₹50 ರೂಪಾಯಿಯಲ್ಲಿ ನಿಮ್ಮ ಮೊಬೈಲ್ ನಂಬರ್ ಲಿಂಕ್ ಇಲ್ಲದ, ಕಳೆದು ಹೋದ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಮಾಹಿತಿ ಹಲವು ಜನರಿಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

 

WhatsApp group join here 

Leave a Comment