LG Scholarship 2025 : ವಿಧ್ಯಾರ್ಥಿಗಳಿಗೆ LG ಕಂಪನಿಯಿಂದ 1 ಲಕ್ಷದವರೆಗೆ ವಿಧ್ಯಾರ್ಥಿ ವೇತನ ! ಹೀಗೆ ಅರ್ಜಿ ಸಲ್ಲಿಸಿ!
LG Scholarship 2025 : ನಮಸ್ಕಾರ ಈ ಲೇಖನಕ್ಕೆ ಭೇಟಿ ನೀಡಿದ ತಮಗೆಲ್ಲ. ಈ ಕೆಳಗೆ LG ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ದೇಶದಲ್ಲಿನ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿಧ್ಯಾರ್ಥಿ ವೇತನದ ಕುರಿತು ಮಾಹಿತಿ ನೀಡಲಾಗಿದೆ. LG ಕಂಪನಿಯಿಂದ life’s good ಅನ್ನುವ ಒಂದು ಉದ್ದೇಶದಿಂದ ಬಡ ಹಾಗೂ ಹಿಂದುಳಿದ ವರ್ಗದ ವಿಧ್ಯಾರ್ಥಿಗಳಿಗೆ 1 ಲಕ್ಷದ ತನಕ ವಿಧ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದರ ಅರ್ಜಿ ಹಾಕುವ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ.
LG ಸ್ಕಾಲರ್ಷಿಪ್ (LG Scholarship 2025) :
ಹೌದು ಸ್ನೇಹಿತರೆ ನಮ್ಮ ದೇಶದಲ್ಲಿನ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ LG ಕಂಪನಿಯಿಂದ ದೇಶದಲ್ಲಿನ ಬಡ ಮಕ್ಕಳಿಗೆ ಅಂದರೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳಂತಹ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವವರು ಅರ್ಜಿ ಹಾಕಬಹುದಾಗಿದೆ. ದೇಶದ ಬಡ ಕುಟುಂಬದಲ್ಲಿನ ಶಿಕ್ಷಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣದ ಸಹಾಯ ನೀಡಿ ಅವರಿಗೆ ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡುವ ಉದ್ದೇಶದಿಂದ ಈ ವಿಧ್ಯಾರ್ಥಿ ವೇತನವನ್ನು LG ಕಂಪನಿಯೂ ನೀಡುತ್ತಿದೆ.
ಈ ವಿಧ್ಯಾರ್ಥಿ ವೇತನಕ್ಕೆ ಯಾವ ವಿಧ್ಯಾರ್ಥಿಗಳಿಗೆ ಅರ್ಜಿ ಹಾಕಲು ಅವಕಾಶ ಇದೆ, ಅರ್ಜಿ ಹಾಕಲು ಅರ್ಹತೆಗಳನ್ನು ಬೇಕು? ಅರ್ಜಿ ಹಾಕಲು ಡಾಕ್ಯುಮೆಂಟ್ಸ್ ಏನು ಬೇಕು ಅನ್ನುವ ಮತ್ತು ಹೇಗೆ LG ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿ ಇಲ್ಲಿದೆ.
LG ವಿಧ್ಯಾರ್ಥಿ ವೇತನ ಅರ್ಜಿಗೆ ಅರ್ಹತೆಗಳೇನು ಬೇಕು?
ವಿಧ್ಯಾರ್ಥಿಗಳು ಭಾರತದ ಪ್ರಜೆ ಆಗಿರುವುದು ಕಡ್ಡಾಯವಾಗಿದೆ.
ವಿಧ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
ವಿಧ್ಯಾರ್ಥಿಗಳು ಇಂದಿನ ತರಗತಿಯಲ್ಲಿ, ಅಂದರೆ ದ್ವಿತೀಯ ಪಿಯುಸಿ ಅಲ್ಲಿ ಕನಿಷ್ಠ 60% ಆಂಕಗಳಿಂದ ಪಾದಾಗಿರಬೇಕು.
ವಿಧ್ಯಾರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರಬೇಕು.
LG ಸ್ಕಾಲರ್ಷಿಪ್ ಗೆ ಅರ್ಜಿ ಹಾಕುವುದು ಹೇಗೆ?
ಸ್ನೇಹಿತರೆ LG ಸ್ಕಾಲರ್ಷಿಪ್ ಗೆ ಅರ್ಜಿ ಹಾಕಲು ನೀವು ಮೊದಲು ಮೇಲಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ, ಹೊಂದಿದ್ದರೆ ಕೆಳಗೆ ನೀಡಿದ ಅಧಿಕೃತ ವೆಬ್ಸೈಟ್ ಭೇಟಿ ನೀಡುವ ಮೂಲಕ ಆನ್ಲೈನ್ ಅಲ್ಲಿಯೇ ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಲು 31 ಜನೇವರಿ 2025 ಕೊನೆಯ ದಿನಾಂಕವಾಗಿದೆ.
ಈ ಮೇಲಿನ ಲಿಂಕ್ ಬಳಸಿಕೊಂಡು ಅಗತ್ಯ ದಾಖಲೆಗಳ ತೆಗೆದುಕೊಂಡು ನಿಮ್ಮ ಮೋಬೈಲ್ ಅಲ್ಲಿಯೇ ಅರ್ಜಿ ಹಾಕಬಹುದು ಇಲ್ಲವಾದರೆ ನಿಮ್ಮ ಹತ್ತಿರದ ಆನ್ಲೈನ್ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಬಹುದು. ಈ ಮಾಹಿತಿಯನ್ನು ಆದಷ್ಟು ಬಡ ಕುಟುಂಬದ ವಿಧ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಶೇರ್ ಮಾಡಿ. ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳು.